ಗ್ರೆಗೊರಿಯನ್ ತಾರೀಕುಪಟ್ಟಿ

	ಇಗರ್ಜಿಯ ಪ್ರಾಚೀನ ತಾರೀಕು ಪಟ್ಟಿಯಲ್ಲಿ ಸುಧಾರಣೆಗಳನ್ನು ಮಾಡಿ ಪೋಪ್ ಗ್ರೆಗೊರಿ ಘಿIII ಎಂಬಾತ ಮಾರ್ಚ್ 1582ರಲ್ಲಿ ಬಳಕೆಗೆ ತಂದ ಹೊಸ ತಾರೀಕು ಪಟ್ಟಿ (ಗ್ರೆಗೊರಿಯನ್ ಕ್ಯಾಲೆಂಡರ್). ಅದುವರೆಗೆ ಇಗರ್ಜಿ ಅನುಸರಿಸುತ್ತಿದ್ದ ತಾರೀಕು ಪಟ್ಟಿಯನ್ನು (ಕ್ಯಾಲೆಂಡರ್) ಎರಡು ದೋಷಪೂರಿತ ಭಾವನೆಗಳ ಮೇಲೆ ಆಧರಿಸಲಾಗಿತ್ತು; ಒಂದು, ಒಂದು ವರ್ಷದಲ್ಲಿ 365.25 ದಿವಸಗಳಿವೆ; ಎರಡು, 235 ಚಾಂದ್ರ ಮಾಸಗಳು 19 ಸೌರ ವರ್ಷಗಳಿಗೆ ಸಮ. ಇವುಗಳಿಂದ ಉದ್ಭವಿಸುವ ಋತು ತಾಪತ್ರಯಗಳನ್ನು ನಿವಾರಿಸಿ ಗ್ರೆಗೊರಿ ತಾರೀಕುಪಟ್ಟಿಗೆ ವೈಜ್ಞಾನಿಕ ನೆಲೆ ಒದಗಿಸಿದ. ವಿವರಗಳಿಗೆ - (ನೋಡಿ- ತಾರೀಕುಪಟ್ಟಿ)
(ಎಂ.ಕೆ.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ